Aurangazeb cover art

Aurangazeb

Preview
Try Premium Plus free
1 credit a month to buy any audiobook in our entire collection.
Access to thousands of additional audiobooks and Originals from the Plus Catalogue.
Member-only deals & discounts.
Auto-renews at $16.45/mo after 30 days. Cancel anytime.

Aurangazeb

By: Om Prakash Prasad, Shakir Khan - translator
Narrated by: Mimicry Mahesh
Try Premium Plus free

$16.45 per month after 30 days. Cancel anytime.

Buy Now for $9.99

Buy Now for $9.99

About this listen

ಯಾವುದೇ ವಿಷಯದ ಪ್ರತಿಪಾದನೆಗೆ ಅಧ್ಯಯನ ಮತ್ತು ನಿರೂಪಣಾ ವಿಧಾನ ಎರಡೂ ಮುಖ್ಯ. ಈ ಕೃತಿಯ ಮೂಲ ಲೇಖಕರಾದ ಡಾ|| ಓಂ ಪ್ರಕಾಶ್ ಪ್ರಸಾದ್ ಅವರ ಅಧ್ಯಯನದ ವಿಸ್ತಾರ ಸಾಕಷ್ಟು ದೊಡ್ಡದಾಗಿದೆ. ಅನೇಕ ವಿದ್ವಾಂಸರ ಕೃತಿಗಳನ್ನು ಅವರು ಅಭ್ಯಾಸ ಮಾಡಿದ್ದಾರೆ. ತಮ್ಮ ವಾದಕ್ಕೆ ಅವರ ವಿಚಾರಗಳನ್ನು ಪೂರಕವಾಗಿ ಬಳಸಿಕೊಳ್ಳುತ್ತಾರೆ. ಔರಂಗಜೇಬನನ್ನು ಕುರಿತು ಕೇವಲ ಕೆಟ್ಟದ್ದನ್ನು ಕಟ್ಟಿಕೊಟ್ಟವರ ಮನೋಸೌಧವನ್ನು ಕೆಡವುತ್ತಾರೆ. ಔರಂಗಜೇಬ ಹಿಂದೂಗಳ ವಿರೋಧಿಯಲ್ಲ ಎಂದು ಸ್ಥಾಪಿಸಲು ಸಾಧಾರ ಸಾಹಸ ಮಾಡುತ್ತಾರೆ. 'ಅವನು ತೆಗೆದುಕೊಂಡ ಧಾರ್ಮಿಕ ನಿರ್ಣಯಗಳೆಲ್ಲಾ ಸಿಂಹಾಸನವನ್ನು ಬಲ ಪಡಿಸುವುದಕ್ಕಾಗಿಯೇ ಹೊರತು ಬೇರಾವುದಕ್ಕೂ ಅಲ್ಲ' ಎಂಬ ಕಾರಣ ಕೊಡುತ್ತಾರೆ. 'ಹೊಸ ದೇವಾಲಯಗಳನ್ನು ನಿರ್ಮಿಸುವುದನ್ನು ನಿಲ್ಲಿಸಿದ್ದೇನೋ ನಿಜ, ಆದರೆ ಹಳೆ ದೇವಾಲಯಗಳನ್ನು ಪುನರುತ್ಥಾನಗೊಳಿಸಲು ಅಪ್ಪಣೆ ನೀಡಿ ದೇಣಿಗೆಯನ್ನು ನೀಡಿದ' ಎಂದು ಹೇಳುತ್ತ ಆಧಾರಗಳನ್ನು ಒದಗಿಸುತ್ತಾರೆ. ಅಂದರೆ ಔರಂಗಜೇಬ ಮೂಲತಃ 'ಹಿಂದೂ ದ್ವೇಷಿ' ಎಂಬುದು ಸುಳ್ಳು ಎಂಬುದು ಈ ವಿವರಗಳ ಸಾರ. ಆದರೆ ಇದೇ ಉಸಿರಿನಲ್ಲಿ ಔರಂಗಜೇಬನು ತನ್ನ ತಂದೆಯ ಕಾಲದಲ್ಲಿ ಮುಚ್ಚಿದ್ದ ದೇವಾಲಯಗಳು ತಾನು ಚಕ್ರವರ್ತಿಯಾದಾಗ ತೆರೆದುಕೊಂಡು ಮತ್ತೆ ಮೂರ್ತಿ ಪ್ರತಿಷ್ಠಾಪನೆ ಮಾಡಿದಾಗ ಕೋಪಗೊಂಡು ಅವುಗಳನ್ನು ಕೆಡವಲು ಆದೇಶಿಸಿದ್ದನ್ನು ಇದೇ ಲೇಖಕರು ವಿವರಿಸುತ್ತಾರೆ. ಇಂಥ 'ಕೋಪ ಬರುವುದು ಸಹಜ' ಎಂದು ಲೇಖಕರು ಸಮರ್ಥಿಸುವುದು ಮಾತ್ರ ಅಸಹಜ! ಯಾಕೆಂದರೆ ೧೬೬೫ರಲ್ಲಿ ಮರುಸ್ಥಾಪನೆಗೊಂಡ ದೇವಾಲಯಗಳನ್ನೆಲ್ಲಾ ಕೆಡವಲು ಔರಂಗಜೇಬ ಆದೇಶಿಸಿದ್ದನ್ನೂ 'ತನ್ನ ಧಾರ್ಮಿಕ ನಾಯಕರನ್ನು ಸಂತೋಷಪಡಿಸಲು ಮತ್ತು ತನ್ನ ಆಡಳಿತ ಭದ್ರತೆಗಾಗಿ ತನ್ನ ಆಡಳಿತದ ಆರಂಭದಲ್ಲೇ ಸೋಮನಾಥ ಮಂದಿರವನ್ನು ಕೆಡವಲು ಆದೇಶಿಸಿದ್ದ' ಎಂಬುದನ್ನೂ ಈ ಕೃತಿಯ ಮೂಲ ಲೇಖಕರೇ ಒಪ್ಪಿದ್ದಾರೆ, ವಿವರಿಸಿದ್ದಾರೆ. ಔರಂಗಜೇಬನ ಇಂಥ ಕೃತ್ಯಗಳೇ ಆತ 'ಹಿಂದೂ ದ್ವೇಷಿ' ಎಂದು ಭಾವಿಸಲು ಕಾರಣವಾಗಿದೆ. ಆದರೆ ಈ ಕೃತಿಯು ಮುಂದುವರೆಯುತ್ತ ಔರಂಗಜೇಬನು ಹಿಂದೂ - ಮುಸ್ಲಿಂ ಭೇದ ಭಾವವಿಲ್ಲದೆ ಮಾಡಿದ ಕೆಲಸಗಳನ್ನು ನಿರೂಪಿಸುತ್ತದೆ.©2022 Storyside IN (P)2022 Storyside IN Literary History & Criticism
No reviews yet
In the spirit of reconciliation, Audible acknowledges the Traditional Custodians of country throughout Australia and their connections to land, sea and community. We pay our respect to their elders past and present and extend that respect to all Aboriginal and Torres Strait Islander peoples today.